ನಾಳೆ ಡಿಸೆಂಬರ್ 17ರಂದು ತ್ವೈಬಾ ಈಶ್ವರಮಂಗಲದಲ್ಲಿ ‘ಝೀಲ್ ಇಷ್ಕ್’ ಬೃಹತ್ ಪ್ರವಾದಿ ಪ್ರಕೀರ್ತನೆ ಮಜ್ಲಿಸ್

Dec 16, 2025 - 16:04
ನಾಳೆ ಡಿಸೆಂಬರ್ 17ರಂದು ತ್ವೈಬಾ ಈಶ್ವರಮಂಗಲದಲ್ಲಿ ‘ಝೀಲ್ ಇಷ್ಕ್’ ಬೃಹತ್ ಪ್ರವಾದಿ ಪ್ರಕೀರ್ತನೆ ಮಜ್ಲಿಸ್

ತ್ವೈಬಾ ಈಶ್ವರಮಂಗಲದಲ್ಲಿ ನಾಳೆ (ಡಿಸೆಂಬರ್ 17) ಮಗ್ರಿಬ್ ನಂತರ ‘ಝೀಲ್ ಇಷ್ಕ್’ ಬೃಹತ್ ಪ್ರವಾದಿ ಪ್ರಕೀರ್ತನೆ ಮಜ್ಲಿಸ್ ನಡೆಯಲಿದೆ. ಸಯ್ಯಿದ್ ಕಣ್ಣವಂ ತಂಙಳ್ ಹಾಗೂ ಉಮರ್ ಜಿಫ್ರಿ ತಂಙಳ್ ಅವರ ಧನ್ಯ ಉಪಸ್ಥಿತಿಯಲ್ಲಿ, ಖ್ಯಾತ ಬುರ್ದಾ ಗಾಯಕರಾದ ತ್ವಾಹ ತಂಙಳ್, ಶುಕೂರ್ ಇರ್ಫಾನಿ, ಶಾಹಿನ್ ಬಾಬು ಹಾಗೂ ಸಂಗಡಿಗರು ಪ್ರವಾದಿ (ﷺ) ರವರ ಪ್ರೇಮವನ್ನು ಪ್ರತಿಬಿಂಬಿಸುವ ಆಧ್ಯಾತ್ಮಿಕ ಗಾನಗಳೊಂದಿಗೆ ಮಜ್ಲಿಸ್‌ಗೆ ನೇತೃತ್ವ ವಹಿಸಲಿದ್ದಾರೆ. ಅನೇಕ ಉಲಮಾ-ಉಮರಾ ಹಾಗೂ ಧಾರ್ಮಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರವಾದಿ ಪ್ರೇಮ, ಆತ್ಮೀಯತೆ ಮತ್ತು ಆಧ್ಯಾತ್ಮಿಕ ಸೌಹಾರ್ದತೆಯನ್ನು ಸಾರುವ ಈ ಮಜ್ಲಿಸ್‌ಗೆ ಪ್ರವಾದಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0