ಸವರ್ಕರ್ ಪ್ರಶಸ್ತಿ ಶಶಿ ತರೂರ್‌ಗೆ; ಪ್ರಶಸ್ತಿ ಸ್ವೀಕರಿಸಲು ತರೂರ್ ನಿರಾಕರಣೆ

Dec 10, 2025 - 14:51
ಸವರ್ಕರ್ ಪ್ರಶಸ್ತಿ ಶಶಿ ತರೂರ್‌ಗೆ; ಪ್ರಶಸ್ತಿ ಸ್ವೀಕರಿಸಲು ತರೂರ್ ನಿರಾಕರಣೆ

ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತರೂರ್ ಅವರು ಪ್ರಶಸ್ತಿಯನ್ನು ಸ್ವೀಕರಿಸದಿರುವ ನಿರ್ಧಾರ ಕೈಗೊಂಡಿದ್ದಾರೆ.

ನವದೆಹಲಿ: ಸಂಸದ ಶಶಿ ತರೂರ್ ಅವರಿಗೆ ಸವರ್ಕರ್ ಪ್ರಶಸ್ತಿ ಘೋಷಿಸಲಾಗಿದೆ. ಆದರೆ, ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತರೂರ್ ಈ ನಿಲುವನ್ನು ತೆಗೆದುಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಸಮಯದಲ್ಲಿ, ತರೂರ್ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋಲ್ಕತ್ತಾಗೆ ತೆರಳಲಿದ್ದಾರೆ.

ಎಚ್‌ಆರ್‌ಡಿಎಸ್ ಇಂಡಿಯಾ (HRDS India) ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

ಪ್ರತಿಕ್ರಿಯೆಗಾಗಿ ಮಾಧ್ಯಮ ಪ್ರತಿನಿಧಿಗಳು ತರೂರ್ ಅವರ ಮನೆಗೆ ಬಂದಿದ್ದರಾದರೂ, ತರೂರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ತರೂರ್ ಅವರ ಕಚೇರಿಯು ತಮ್ಮ ನಿಲುವನ್ನು ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0