ದ.ಕ ಜಿಲ್ಲಾ ಈಸ್ಟ್ ಮುಅಲ್ಲಿಂ ಮೆಹರ್ಜಾನ್ 2025: ಸುಳ್ಯ ರೇಂಜ್ ಚಾಂಪಿಯನ್ಸ್

Nov 3, 2025 - 14:27
ದ.ಕ ಜಿಲ್ಲಾ ಈಸ್ಟ್ ಮುಅಲ್ಲಿಂ ಮೆಹರ್ಜಾನ್ 2025: ಸುಳ್ಯ ರೇಂಜ್ ಚಾಂಪಿಯನ್ಸ್

ಬೆಳ್ತಂಗಡಿ: ಮುರ ನಾವೂರಿನಲ್ಲಿ ನಡೆದ ದ.ಕ ಜಿಲ್ಲಾ ಈಸ್ಟ್ ಮುಅಲ್ಲಿಂ ಮೆಹರ್ಜಾನ್ 2025 ಮದ್ರಸ ಅಧ್ಯಾಪಕರುಗಳ ಸ್ಪರ್ಧಾ ಕಾರ್ಯಕ್ರಮಗಳಲ್ಲಿ 13 ರೇಂಜಿಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸುಳ್ಯ ರೇಂಜ್ ಮುಅಲ್ಲಿಮರುಗಳು ಸಾಧನೆಗೈದು ವಿನ್ನರ್ ಟ್ರೋಪಿ ತಮ್ಮದಾಗಿಸಿ, ಪ್ರತಿಭಾವಂತ ಹತ್ತು ಅಧ್ಯಾಪಕರುಗಳು ವಿವಿಧ ಸ್ಪರ್ಧೆಗಳೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅಬ್ದುಲ್ ಲತೀಫ್ ಸಖಾಫಿ ಜಟ್ಟಿಪಳ್ಳ,ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ಮುಹಮ್ಮದ್ ಹನೀಫ್ ಸಖಾಫಿ ಗಾಂಧಿನಗರ,ಹುಸೈನಾರ್ ಮದನಿ ಗಾಂಧಿನಗರ,ಅಬೂಬಕ್ಕರ್ ಸಖಾಫಿ ಗಾಂಧಿನಗರ,ಇರ್ಫಾನ್ ಹಿಮಮಿ ಗಾಂಧಿನಗರ,ಇರ್ಫಾನ್ ಸಅದಿ ಗಾಂಧಿನಗರ,ಉಬೈದುಲ್ಲಾ ಸಅದಿ ಗಾಂಧಿನಗರ,ಅಸ್ಸೆಯ್ಯಿದ್ ಹುಸೈನ್ ಪಾಷಾ ತಂಙಳ್ ಸಅದಿ ಅನ್ಸಾರಿಯ್ಯಾ,ಇರ್ಷಾದ್ ನೂರಾನಿ ಅನ್ಸಾರಿಯ್ಯಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ನವಂಬರ್ ಹದಿನೈದರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರಾಜ್ಯ ಮುಅಲ್ಲಿಂ ಮೆಹರ್ಜಾನ್ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವರು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0