ಗೃಹ ಲಕ್ಷ್ಮೀ ಹಣದಿಂದ ಪೆಟ್ರೋಲ್ ಮಾರಾಟ ಮಾಡಿ ಜೀವನ: ಸರ್ಕಾರಕ್ಕೆ ಮಹಿಳೆಯಿಂದ ಧನ್ಯವಾದ

Apr 13, 2025 - 11:35
ಗೃಹ ಲಕ್ಷ್ಮೀ ಹಣದಿಂದ ಪೆಟ್ರೋಲ್ ಮಾರಾಟ ಮಾಡಿ ಜೀವನ: ಸರ್ಕಾರಕ್ಕೆ ಮಹಿಳೆಯಿಂದ ಧನ್ಯವಾದ

ಮೈಸೂರು: ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಲ್ಲಿ ಪೆಟ್ರೋಲ್, ಇಸ್ಪಿಟ್ ಕಾರ್ಡ್  ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ ಎಂದು ಯೋಜನೆಯ ಫಲಾನುಭವಿಯೊಬ್ಬರು ಹೇಳಿದ್ದಾರೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ.  ಇಸ್ಪಿಟ್ ಕಾರ್ಡ್ ಮಾರಾಟ ಮಾಡುತ್ತಿದ್ದೇನೆ ಎಂದಾಗ ಸಭೆಯಲ್ಲಿದ್ದ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಶಾಸಕ ದರ್ಶನ್ ಧ್ರುವನಾರಾಯಣ್ ಕ್ಷಣ ಕಾಲ ವಿಚಲಿತರಾದರು.

ಗೃಹ ಲಕ್ಷ್ಮೀಯಿಂದ ಸಾಕಷ್ಟು ಸಹಾಯವಾಗಿದೆ. ಈ ಹಣದಿಂದ ಪೆಟ್ಟಿ ಅಂಗಡಿ ಇಟ್ಟುಕೊಂಡು ಮನೆ ವ್ಯವಹಾರ ನೋಡಿಕೊಂಡಿದ್ದೇನೆ. ಇದರಿಂದ ಬಂದ ಲಾಭದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿದೆ ಎಂದು ಅವರು ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0