ಆಂಧ್ರಪ್ರದೇಶ | ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ: 6 ಸಾವು

Oct 9, 2025 - 10:27
ಆಂಧ್ರಪ್ರದೇಶ | ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ: 6 ಸಾವು

ರಾಯವರಂ: ಆಂಧ್ರಪ್ರದೇಶದ ಡಾ. ಬಿ. ಆರ್‌. ಅಂಬೇಡ್ಕರ್‌ ಕೋನಸೀಮೆ ಜಿಲ್ಲೆಯಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪಟಾಕಿ ತಯಾರಿಕಾ ಘಟಕದಲ್ಲಿನ ಕಳಪೆ ನಿರ್ವಹಣೆಯಿಂದ, ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪಟಾಕಿ ತಯಾರಿಕಾ ಘಟಕವು ಪರವಾನಗಿ ಹೊಂದಿದೆ. ಈಗ 6 ಮೃತದೇಹ ಹೊರತೆಗೆಯಲಾಗಿದ್ದು, ಅದರ ಗುರುತು ಪತ್ತೆ ಮಾಡುತ್ತಿದ್ದೇವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0