ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ (MUS) ಸುಳ್ಯ ಝೋನ್ ವಾರ್ಷಿಕ ಮಹಾಸಬೆ ಹಾಗೂ ನೂತನ ಸಮಿತಿ ರಚನೆ

Aug 14, 2025 - 09:19
ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ (MUS)  ಸುಳ್ಯ ಝೋನ್ ವಾರ್ಷಿಕ ಮಹಾಸಬೆ ಹಾಗೂ ನೂತನ ಸಮಿತಿ ರಚನೆ

ಅಧ್ಯಕ್ಷರಾಗಿ ಸಯ್ಯಿದ್ ತ್ವಾಹಿರ್ ಸಅದಿ ಪ್ರಧಾನ ಕಾರ್ಯದರ್ಶಿಯಾಗಿ ರಿಯಾನ್ ಸಅದಿ ಬೆಳ್ಳಾರೆ ಕೋಶಾಧಿಕಾರಿಯಾಗಿ AB ಅಶ್ರಫ್ ಸಅದಿ ಅಜ್ಜಾವರ ಆಯ್ಕೆ

ದಿನಾಂಕ 13-08-2025 ಬುಧವಾರದಂದು ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ (MUS)  ಸುಳ್ಯ ಝೋನ್ ವಾರ್ಷಿಕ ಮಹಾಸಬೆಯು ಸಯ್ಯಿದ್ ತ್ವಾಹಿರ್ ಸ ಅದಿ ಯವರ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಅಬ್ದುಲ್ಲಾ ಸ ಅದಿ ಮೇನಾಲ ಸಭೆಯನ್ನು ಉದ್ಘಾಟಿಸಿದರು. ಸಅದಿಯದ ಉಸ್ತಾದರುಗಳ ಹಾಗೂ ಸಾರಥಿಗಳ ಸಂಸ್ಮರಣೆಯನ್ನು ನಡೆಸಿ ಜಾಲ್ಸೂರ್ ಅಡ್ಕಾರ್ ಖತೀಬ್ ಮುನೀರ್ ಸ ಅದಿ ನೆಲ್ಲಿಕ್ಕುನ್ನು ಅನುಸ್ಮರಣಾ ಭಾಷಣ ನಡೆಸಿದರು.  ದವೂದ್ ಸ ಅದಿ ಆಶಂಸ ಮಾತುಗಳನ್ನಾಡಿದರು. ನಂತರ ಸಭೆಯ ವೀಕ್ಷಕರಾಗಿ ಆಗಮಿಸಿದ MUS ಜಿಲ್ಲಾ ಕಾರ್ಯದರ್ಶಿ ಖಾಲಿದ್ ಸ ಅದಿ ಬೇಂಗಿಲ ರವರ ನೇತ್ರತ್ವದಲ್ಲಿ ಹಳೆಯ ಸಮಿತಿಯನ್ನು ಬರ್ಕಾಸ್ತ್ ಗೊಳಿಸಿ ನೂತನ 2025-26 ನೇ ಸಾಲಿನ 13 ಜನರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. 
ನೂತನ ಸಮಿತಿ :-
ಅಧ್ಯಕ್ಷರು - ಸಯ್ಯಿದ್ ತ್ವಾಹಿರ್ ಸಅದಿ
ಪ್ರಧಾನ ಕಾರ್ಯದರ್ಶಿ- ರಿಯಾನ್ ಸಅದಿ ಬೆಳ್ಳಾರೆ
ಕೋಶಾಧಿಕಾರಿ - AB ಅಶ್ರಫ್ ಸಅದಿ ಅಜ್ಜಾವರ

ಉಪಾಧ್ಯಕ್ಷರು-
* ನೌಫಲ್ ಸಅದಿ ಜಾಲ್ಸೂರ್ (ಸಾಂತ್ವನ)
* ದಾವೂದ್ ಸಅದಿ ಬೆಳ್ಳಾರೆ( ಸಹಾಯ ನಿಧಿ)

ಜೊತೆ ಕಾರ್ಯದರ್ಶಿ-
* ಹಸನ್ ಸಅದಿ ಪೈಂಬಚ್ಚಾಲ್ ( ಸಾಂತ್ವನ)
* ಸಿದ್ದೀಕ್ ಸಅದಿ ಎಣ್ಮೂರು ( ಸಹಾಯ ನಿಧಿ)

ಕಾರ್ಯಕಾರಿ ಸಮಿತಿ ಸದಸ್ಯರು -.
* ಅಬ್ದುಲ್ಲಾ ಸಅದಿ ಮೇನಾಲ
* ಹನೀಫ್ ಸ ಅದಿ ಪಂಜಿಕ್ಕಲ್
* ಇಸ್ಮಾಯಿಲ್ ಸಅದಿ ಕುಂಭಕ್ಕೋಡ್
* ಅಬ್ದುರ್ರಹ್ಮಾನ್ ಸಅದಿ ಕನಕಮಜಲು
* ಮುಖ್ತಾರ್ ಸ ಅದಿ ಮೇನಾಲ
* ನೌಶಾದ್ ಸ ಅದಿ ಪೆರುವಾಜೆ

ನಂತರ ನಮ್ಮನ್ನಗಲಿದ ಸ ಅದಿಯಾ ಉಸ್ತಾದರುಗಳ ಸನ್ನಿಧಿಗೂ ನಮ್ಮ ಕುಟುಂಬದವರಿಗೂ ತಹ್ಲೀಲ್ ಸಮರ್ಪಿಸಿ ದುಆ ನಡೆಯಿತು. ಸಿದ್ದೀಕ್ ಸಅದಿ ಸ್ವಾಗತಿಸಿ ರಿಯಾನ್ ಸಅದಿ ವಂದಿಸಿದರು.
ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವು ಕೊನೆಗೊಳಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0