ಪೊಸೊಟ್ ತಂಙಳ್ ಉರೂಸ್ ಭಾನುವಾರ ಮುಕ್ತಾಯ: ಮಳ್'ಹರ್ ಸಿಲ್ವರ್ ಜುಬಿಲಿಗೆ ಅದ್ಧೂರಿ ಆರಂಭ
ಮಂಜೇಶ್ವರ: ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸೇವಾ ಚಟುವಟಿಕೆಗಳ ಕ್ಷೇತ್ರದಲ್ಲಿ ಕಾಲು ಶತಮಾನ ಪೂರೈಸಿರುವ ಮಂಜೇಶ್ವರ ಮಳ್'ಹರ್ ಸಂಸ್ಥೆಗಳ ಬೆಳ್ಳಿ ಮಹೋತ್ಸವ ಸಂಭ್ರಮ ಅದ್ಧೂರಿಯಾಗಿ ಆರಂಭಗೊಂಡಿದೆ . ಸಮಸ್ತ ಕೇಂದ್ರ ಮುಶಾವರ ಸದಸ್ಯ, ಹಲವಾರು ಮೊಹಲ್ಲಾಗಳ ಖಾಝಿ ಮತ್ತು ಮಳ್'ಹರ್ ಶಿಲ್ಪಿ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ ಅವರ 10ನೇ ಉರೂಸ್ ಭಾನುವಾರ ಮುಕ್ತಾಯಗೊಳ್ಳಲಿದೆ. ಮುಂದಿನ ನಾಲ್ಕು ದಿನಗಳವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾವಿರಾರು ವಿಶ್ವಾಸಿಗಳು ಪಾಲ್ಗೊಳ್ಳರಿರುವರು . ಸಾವಿರಾರು ಜನರಿಗೆ ಅನ್ನದಾನ ಮಾಡುವುದರೊಂದಿಗೆ ಉರೂಸ್ ಕಾರ್ಯಕ್ರಮಗಳು ಭಾನುವಾರದಂದು ಮುಕ್ತಾಯಗೊಳ್ಳಲಿದೆ. ಉರೂಸಿನ ಮೊದಲ ದಿನ ನಡೆದ ಉದ್ಘಾಟನಾ ಸಭೆಯು ಬಹಳ ಪ್ರೌಢವಾಗಿ ಜರುಗಿತು.
ಸೈಯದ್ ಹಸನ್ ಪೂಕೋಯ ತಂಙಳ್ ಕರುವಂತಿರುತ್ತಿ ಆರಂಭಿಕ ಪ್ರಾರ್ಥನೆ ನಿರ್ವಹಿಸಿದರು. ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಉಪಾಧ್ಯಕ್ಷ ಖುದ್'ವತುಸ್ಸದಾತ್ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರಂ ಎಂ.ಎಲ್.ಎ , ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ಮಳ್'ಹರ್ ಸಿಲ್ವರ್ ಜುಬಿಲಿ ಮಹೋತ್ಸವದ ಸ್ಮರಣಿಕೆಯನ್ನು ಮಂಜೇಶ್ವರ ಶಾಸಕ ಕುಂಬೋಳ್ ತಂಙಳವರಿಗೆ ನೀಡಿ ಬಿಡುಗಡೆಗೊಳಿಸಿದರು. ಅಬ್ದುಲ್ ರಶೀದ್ ಸಖಾಫಿ ಕಕ್ಕಿಂಜೆ ಮುಖ್ಯ ಪ್ರಭಾಷಣಗೈದರು. ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿದರು.
ಸೈಯದ್ ಅತಾವುಲ್ಲಾ ತಂಙಳ್ ಉದ್ಯಾವರ, ಸೈಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ, ಸೈಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ, ಸೈಯದ್ ಅಬ್ದುಲ್ ಕರೀಂ ಅಲ್ ಹಾದಿ, ಸೈಯದ್ ಎಂ ಎಸ್ ತಂಗಳ್ ಉದ್ಯಾವರ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬ್,ಇಬ್ರಾಹಿಂ ಫೈಝಿ ಕನ್ಯಾನ, ಸಿದ್ದೀಕ್ ಸಖಾಫಿ ಬಾಯಾರ್, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಕೆ.ಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಮುಹಮ್ಮದಲಿ ಅಹ್ಸನಿ ಮಖ್ದೂಮಿಯಾ, ಅಬ್ದುಲ್ ಹಮೀದ್ ಸಖಾಫಿ ಬಾಕಿಮಾರ್ ಮೊದಲಾದವರು ಭಾಷಣ ಮಾಡಿದರು.
ಇಂದು ಶುಕ್ರವಾರ ಜುಮುಆದ ನಂತರ ನಡೆಯುವ ಅನುಸ್ಮರಣಾ ಸಭೆಗೆ ಬಾಯಾರ್ ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ನೇತೃತ್ವ ನೀಡಲಿದ್ದು, ಸಂಜೆ 4 ಗಂಟೆಗೆ ಕಲ್ಲಕಟ್ಟ ಸೈಯದ್ ಇಬ್ರಾಹಿಂ ಪೂಕುಂಞಿ ತಂಙಳ್ ಹದಾಯಾ ಸಭೆಗೆ ಚಾಲನೆ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ಜಲಸತು ನಸೀಹ ನಡೆಯಲಿದೆ. 21ರಂದು ಬೆಳಗ್ಗೆ 10ಕ್ಕೆ ಮಳ್'ಹರೀಸ್ ಮೀಟ್ ಹಾಗೂ 11ಕ್ಕೆ ಸ್ಥಾನ ವಸ್ತ್ರ ವಿತರಣೆ, ಮಧ್ಯಾಹ್ನ 2ಕ್ಕೆ ಆಂದೋಲನ ಸಮ್ಮೇಳನ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯುವ ಸನದ್ ದಾನ ಸಮ್ಮೇಳನವನ್ನು ಸಮಸ್ತ ಅಧ್ಯಕ್ಷ ರಯೀಸುಲ್ ಉಲಮಾ ಇ.ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ಇಂಡ್ಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸನದ್ ದಾನ ಭಾಷಣ ಮಾಡಲಿದ್ದಾರೆ.
ಫೋಟೋ: ಮಂಜೇಶ್ವರಂ ಮಳ್'ಹರ್ ಸಿಲ್ವರ್ ಜುಬಿಲಿ ಅಧಿಕೃತ ಉದ್ಘಾಟನೆಯನ್ನು ಸಮಸ್ತ ಉಪಾಧ್ಯಕ್ಷ ಖುದ್ ವತುಸ್ಸಾದತ್ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ನಿರ್ವಹಿಸುವುದು .
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



