ಅಸ್ಸಾಂ: ಸಂಚಾರಕ್ಕೆ ಮುಕ್ತವಾದ ತಿಂಗಳಲ್ಲೇ ಕುಸಿದ ಸೇತುವೆ

Jun 18, 2025 - 19:22
ಅಸ್ಸಾಂ: ಸಂಚಾರಕ್ಕೆ ಮುಕ್ತವಾದ ತಿಂಗಳಲ್ಲೇ ಕುಸಿದ ಸೇತುವೆ

ಸಿಲ್ಚರ್: ಅಸ್ಸಾಂನ ಖಚ್ಚರ್‌ ಜಿಲ್ಲೆಯಲ್ಲಿ ನವೀಕರಣಗೊಂಡ ಸೇತುವೆಯೊಂದು ಕುಸಿದು ಓವರ್‌ಲೋಡ್ ಆಗಿದ್ದ ಎರಡು ಲಾರಿಗಳು ಹಾರಂಗ್ ನದಿಗೆ ಬಿದ್ದಿವೆ. ಘಟನೆಯಲ್ಲಿ ಚಾಲಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ಹಾಗೂ ಮೇಘಾಲಯವನ್ನು ಸಂಪರ್ಕಿಸುವ ಸಿಲ್ಚರ್–ಕಲೈನ್ ರಸ್ತೆಯಲ್ಲಿರುವ ದಶಕಗಳ ಹಳೆಯ ಈ ಸೇತುವೆ ಸುಮಾರು ಎರಡು ವರ್ಷಗಳ ನವೀಕರಣ ಕೆಲಸಗಳ ಬಳಿಕ ಕಳೆದ ತಿಂಗಳಷ್ಟೇ ಸಂಚಾರಕ್ಕೆ ಮುಕ್ತವಾಗಿತ್ತು.

ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೃದುಲ್ ಯಾದವ್ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಂಚಾರ ನಿರ್ಬಂಧಗಳಿದ್ದವು, ಓವರ್‌ಲೋಡ್ ವಾಹನಗಳ ತಪಾಸಣೆಗೆ ನಾಲ್ಕು ಚೆಕ್‌ಪಾಯಿಂಟ್‌ಗಳನ್ನು ನಿರ್ಮಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0